ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್. ಇವರ ಕೆಲವು ಕೃತಿಗಳು ಇಂತಿವೆ: ಉಪಾಸನೆ:- ೧೯೭೩, ೧೯೭೪, ೧೯೫೧; 'ಕನ್ನಡ ಪ್ರಭ' ,ಧಾರಾವಾಹಿಯಾಗಿ ಮೂಡಿ ಬಂದಿದೆ. ಬಳ್ಳಿ ಚಿಗುರಿತು: -೧೯೭೪,೨೦೦೪,; 'ಪ್ರಜಾಮತ' ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಹೊರಬಂದಿದೆ. ಶಿಶಿರ ವಸಂತ:- ೧೯೭೫; 'ತುಷಾರ', ತಿಂಗಳಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ. ಸೆರೆ:- ೧೯೮೧; 'ಕನ್ನಡಫ್ರಭ' ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ. ಚಂಡಮಾರುತ:- ೧೯೭೮; 'ಸಂಯುಕ್ತ ಕರ್ನಾಟಕ', ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ. ಒಡಕು ದೋಣಿ:- ೧೯೮೨; 'ವನಿತಾ' ಮಾಸಪತ್ರಿಕೆಯಲ್ಲಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಅದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದೆ. ಆಹುತಿ:- ೧೯೮೪; 'ವನಿತಾ' ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಆದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ. ಬಂದಿ:- ೧೯೯೬; ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.ಈ ಕಾದಂಬರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ. ಶೋಧ:- ೨೦೦೬; 'ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ. ಕುಂತಿ:- ಅಚ್ಚಿನಲ್ಲಿ. ಕಥಾ ಸಂಕಲನ[ಬದಲಾಯಿಸಿ] ಅವನ ನೆರಳು(೧೫ ಕಥೆಗಳು):- ೧೯೯೩; ಸುಧಾ, ತರಂಗ, ಮಂಗಳಾ, ವನಿತಾ ಪತ್ರಿಕೆಯಲ್ಲಿ ಪ್ರಕಟಗೊಂಡಿದವೆ. ಕೆಂಪು ಗುಲಾಬಿ:- ಕಥಾ ಸಂಕಲನ: ೨೦೦೧; 'ಸುಧಾ' ಮತ್ತು 'ಮಂಗಳಾ' ವಾರಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸಂಕಲನ: ಪ್ರಶಸ್ತಿ [ಬದಲಾಯಿಸಿ] ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ಪ್ರವಾಸ ಕಥನ[ಬದಲಾಯಿಸಿ] ಯೂರೋಪ್ ಅಮೇರಿಕಾದ ಇಣುಕು ನೋಟ:- ೧೯೯೪ ಇವರ ಕಾದಂಬರಿ ‘ಉಪಾಸನೆ’ ಚಲನಚಿತ್ರವಾಗಿ ಜನಪ್ರಿಯವಾಯಿತು. ಚಲನಚಿತ್ರ ನಿರ್ದೇಶಕರು ಪುಟ್ಟಣ್ಣ ಕಣಗಾಲ್. [೧]ಉಲ್ಲೇಖ[ಬದಲಾಯಿಸಿ] ↑ ನಮ್ಮ ಬದುಕಿನ ಪುಟಗಳು (ಲೇಖಕಿಯರ ಆತ್ಮಕಥೆಗಳು) ಪ್ರಾಧಾನ ಸಂಪಾದಕರು ಡಾ.ಕೆ,ಆರ್.ಸಂಧ್ಯಾರೆಡ್ಡಿ. ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪು. ಸಂ. ೧೩೭